|
ಅಂಬೇಡ್ಕರ್ ಜಯಂತಿ : ಇಲ್ಲಿವೆ ಸಂವಿಧಾನ ಶಿಲ್ಪಿಯ ಅಮೂಲ್ಯ ಸಂದೇಶಗಳು Vijaya Karnataka Web•14 Apr 2021, 10:01 am Subscribe ಇಂದು ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್ ಜಯಂತಿ. ನಮ್ಮ ದೇಶ ಕಂಡ ಈ ಮಹಾನ್ ನಾಯಕರ ಕೊಡುಗೆಯನ್ನು ಎಲ್ಲರೂ ಸ್ಮರಿಸುವ ದಿನವಿಂದು. ಇಲ್ಲಿವೆ ಅಂಬೇಡ್ಕರ್ ಅವರ ಅಮೂಲ್ಯ ಸಂದೇಶಗಳು.
ಸಂವಿಧಾನ ಭಾರತದ ಪವಿತ್ರ ಗ್ರಂಥ. ಇದು ನಮ್ಮ ಬದುಕಿಗೂ ದಾರಿ. ಈ ಪವಿತ್ರ ಗ್ರಂಥದ ಮೂಲಕ ಪ್ರಜಾಪ್ರಭುತ್ವಕ್ಕೊಂದು ಅರ್ಥ ಕಲ್ಪಿಸುವ ವ್ಯವಸ್ಥೆಯನ್ನು ಜಾರಿಗೆ ತರಲಾಯಿತು. ಈ ಪವಿತ್ರ ಗ್ರಂಥವನ್ನು ನಮಗೆ ನೀಡಿದವರು ಎಲ್ಲರ ಪಾಲಿನ ಸ್ಫೂರ್ತಿಯ ಚಿಲುಮೆ ಡಾ ಬಿ ಆರ್ ಅಂಬೇಡ್ಕರ್. 14ನೇ ಏಪ್ರಿಲ್ 1891ರಲ್ಲಿ ಮಧ್ಯಪ್ರದೇಶದ ಮಾಹೋ ಎಂಬಲ್ಲಿ ಜನಿಸಿದ ಡಾ ಅಂಬೇಡ್ಕರ್ ಅವರ ಬಾಲ್ಯದ ದಿನಗಳು ಬಲು ಕಷ್ಟದಿಂದಲೇ ಕೂಡಿತ್ತು. ಅಸ್ಪೃಶ್ಯತೆ, ಅಸಮಾನತೆಯ ನೋವಿನ ನಡುವೆ ಬೆಳೆದಿದ್ದ ಅಂಬೇಡ್ಕರ್ ಅವರು ಬಳಿಕ ಇಡೀ ವಿಶ್ವವೇ ಗೌರವಿಸುವಂತಹ ನಾಯಕರಾಗಿ ರೂಪುಗೊಂಡಿದ್ದರು. ಅದೆಷ್ಟೋ ಜನರಿಗೆ ಸ್ಫೂರ್ತಿಯಾಗಿದ್ದರು. ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಪ್ರೇರಣೆಯಾಗಿದ್ದರು... ಇಂತಹ ಮಹಾನ್ ನಾಯಕರ ಕೆಲವು ಅದ್ಭುತ ಮಾತುಗಳು ಇಲ್ಲಿವೆ...
* ಬದುಕು ಸುದೀರ್ಘವಾಗಿರುವುದಕ್ಕಿಂತ ಶ್ರೇಷ್ಠವಾಗಿರಬೇಕು * ಮಹಿಳೆಯರು ಸಾಧಿಸಿದ ಪ್ರಗತಿಯ ಆಧಾರದಲ್ಲಿ ನಾನು ಸಮುದಾಯವೊಂದರ ಅಭಿವೃದ್ಧಿಯನ್ನು ಅಳೆಯುತ್ತೇನೆ * ಸಂವಿಧಾನವನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ಅರಿವಿಗೆ ಬಂದರೆ ಅದನ್ನು ಸುಡುವ ಮೊದಲಿಗ ನಾನಾಗಿರುತ್ತೇನೆ * ಸ್ವಾಭಿಮಾನದಿಂದ ಈ ಜಗತ್ತಿನಲ್ಲಿ ಬದುಕಲು ಕಲಿಯಬೇಕು. ಈ ಜಗತ್ತಿಗೆ ಏನನ್ನಾದರೂ ಕೊಡುಗೆ ನೀಡುವ ಮಹಾತ್ವಾಕಾಂಕ್ಷೆಯನ್ನು ನೀವು ಹೊಂದಬೇಕು. * ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವವನ್ನು ಕಲಿಸುವ ಧರ್ಮ ನನಗೆ ಇಷ್ಟ * ತಾತ್ಸಾರದ ಭಾವನೆ ಜನರ ಮೇಲೆ ಪರಿಣಾಮ ಬೀರುವ ಕೆಟ್ಟ ರೀತಿಯ ಕಾಯಿಲೆ * ಒಬ್ಬ ಮಹಾನ್ ವ್ಯಕ್ತಿ ಒಬ್ಬ ಪ್ರಸಿದ್ಧ ವ್ಯಕ್ತಿಗಿಂತ ಭಿನ್ನನಾಗಿರುತ್ತಾನೆ. ಆತ ಸಮಾಜದ ಸೇವಕನಾಗಲು ಸಿದ್ಧನಾಗಿರುತ್ತಾನೆ * ರಾಜಕೀಯ ಎಂಬ ದೇಹಕ್ಕೆ ಕಾನೂನು ಮತ್ತು ಸುವ್ಯವಸ್ಥೆಗಳೇ ಔಷಧ. ಈ ರಾಜಕೀಯ ದೇಹಕ್ಕೆ ಖಾಯಿಲೆ ಬಂದರೆ ಖಂಡಿತವಾಗಿಯೂ ಔಷಧಿ ನೀಡಬೇಕಾಗುತ್ತದೆ ಸಂವಾದ ಆರಂಭಿಸಿಪ್ರತಿಕ್ರಿಯೆ ಸಲ್ಲಿಸಿ ಓದಲೇ ಬೇಕಾದ ಸುದ್ದಿ
ಸಂಬಂಧಿತ ಸುದ್ದಿ
Kannada News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್ ಮಾಡಿಕೊಳ್ಳಿ ಹಾಗೂ ರಿಪೋರ್ಟ್ ಕಳಿಸಿಲೇಟೆಸ್ಟ್ ನ್ಯೂಸ್ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್ ಲೈಕ್ ಮಾಡಿರಿ (责任编辑:) |
